ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಮುಸ್ಲಿಂ, ದಲಿತ ವಿದ್ಯಾರ್ಥಿಗಳ ಹಿಂದುಳಿಯುವಿಕೆ ಕಳವಳಕಾರಿ: ಎಸ್.ಡಿ.ಪಿ.ಐ
ಬೆಂಗಳೂರು. ಮೆ.15: ಇತ್ತೀಚೆಗೆ ಪ್ರಕಟಣೆಗೊಂಡ ಎಸ್‍ಎಸ್‍ಎಲ್‍ಸಿ ಯ ಫಲಿತಾಂಶದಲ್ಲಿ ರಾಜ್ಯದ ಮುಸ್ಲಿಂ ಹಾಗೂ ದಲಿತ ಸಮುದಾಯದ ವಿದ್ಯಾರ್ಥಿಗಳು ಹಿಂದುಳಿಯುವಿಕೆಯು ಕಳವಳಕಾರಿಯೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ, ಕರ್ನಾಟಕ ರಾಜ್ಯ ಸಮಿತಿ ಅಭಿಪ್ರಾಯಪಟ್ಟಿದೆ.
ಈ ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಮುಸ್ಲಿಂ ಹಾಗೂ ದಲಿತ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ ಎಂದು ವರ್ಗವಾರು ಪಲಿತಾಂಶವು ತಿಳಿಸಿದೆ. ಫಲಿತಾಂಶದಲ್ಲಿ ಪ್ರವರ್ಗ 3ಎ ಶೇ 91.06 , ಪ್ರವರ್ಗ 3ಬಿ 89.11 ಫಲಿತಾಂಶವನ್ನು ಹೊಂದಿದ್ದು, ಆದರೆ ಪ್ರವರ್ಗ 2ಬಿ ಶೇ 80.82 ಹಾಗೂ ಪರಿಶಿಷ್ಟ ಜಾತಿ ಶೇ 79.81 ಪಡೆದಿದೆ. ಇದು ಎಸ್‍ಎಸ್‍ಎಲ್‍ಸಿ ತೇರ್ಗಡೆಯಲ್ಲಿ ಇತರ ವರ್ಗಗಳಿಂದ ಶೇಕಡಾ 10ರಷ್ಟು ಹಿಂದೆ ಬಿದ್ದಿರುವುದನ್ನು ತೋರಿಸುತ್ತದೆ. ಹಾಗೂ ಫಲಿತಾಂಶದಲ್ಲಿ ಸರಾಸರಿ ಶೇ 85.87 ಪಡೆಯಬೇಕಿತ್ತು ಆದರೆ ಮುಸ್ಲಿಂ ಹಾಗೂ ದಲಿತ ವಿದ್ಯಾರ್ಥಿಗಳು ಸರಾಸರಿ ಫಲಿತಾಂಶಕ್ಕಿಂತಲೂ ಕಡಿಮೆಯಲ್ಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ, ಸಮರ್ಪಕ ತಜ್ನರ ತಂಡವನ್ನು ರಚಿಸಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣವನ್ನು ನೀಡಬೇಕೆಂದು ಎಸ್.ಡಿ.ಪಿ.ಐ ಆಗ್ರಹಿಸಿದೆ.
ಎಸ್‍ಎಸ್‍ಎಲ್‍ಸಿ ಯ ವರ್ಗವಾರು ಪಲಿತಾಂಶ ಪ್ರಕಟಣೆಯನ್ನು ಎಸ್.ಡಿ.ಪಿ.ಐ ಸ್ವಾಗತಿಸಿದೆ. ಮತ್ತು ಸರಕಾರದ ಕ್ರಮವನ್ನು ಅಭಿನಂದಿಸಿದೆ. ಅದಲ್ಲದೆ ಜಾತಿವಾರು ಫಲಿತಾಂಶ ಪ್ರಕಟಣೆಯನ್ನು ಕೆಲವರು ವಿರೊಧಿಸಿರುವುದು ಸರಿಯಾದ ಕ್ರಮವಲ್ಲವೆಂದು ಎಸ್.ಡಿ.ಪಿ.ಐ ತಿಳಿಸಿದೆ. ಈ ರೀತಿಯ ವರ್ಗವಾರು ಪಲಿತಾಂಶ ಪ್ರಕಟವಾಗುವುದರಿಂದ ರಾಜ್ಯದಲ್ಲಿ ಯಾವುದೆಲ್ಲಾ ಜಾತಿಗಳು ಶಿಕ್ಷಣದಲ್ಲಿ ಹಿಂದುಳಿದಿವೆ ಎಂಬುವುದು ಸ್ಪಷ್ಟವಾಗುತ್ತದೆ ಮತ್ತು ಹಿಂದುಳಿದಂತಹ ಜಾತಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಿ ಅವರನ್ನು ಮೇಲೆಕ್ಕೆತ್ತುವಂತಹ ಅಭಿವೃದ್ಧಿ ಕಾರ್ಯಗಳು ಹಮ್ಮಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದೆ.
ಈ ನಿಟ್ಟಿನಲ್ಲಿ ಸರಕಾರವು ಈ ವರ್ಗಗಳಿಗೆ ಹೆಚ್ಚಿನ ಆಸಕ್ತಿ ನೀಡಿ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸೌಲಭ್ಯಗಳನ್ನು ನೀಡುವುದರ ಮೂಲಕ ಹಿಂದುಳಿದ ವರ್ಗವನ್ನು ಮೇಲೆಕ್ಕೆತ್ತುವಂತೆ ಹಾಗೂ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ| ಮೆಹಬೂಬ್ ಶರೀಫ್ ಅವಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No Comments