ಮುಸ್ಲಿಮರ ಮತದಾನದ ಹಕ್ಕು ರದ್ದತಿಗೆ ಶಿವಸೇನೆ ಕರೆ: ಎಸ್.ಡಿ.ಪಿ.ಐ ಖಂಡನೆ 

ಬೆಂಗಳೂರು, ಎ.13: ಮುಸ್ಲಿಮರ ಮತದಾನದ ಹಕ್ಕನ್ನು ರದ್ದು ಪಡಿಸುವಂತೆ ಶಿವಸೇನೆಯು ಆಗ್ರಹಿಸಿದ ಕ್ರಮವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ)ಯು ಸೋಮವಾರ ರಾಜ್ಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯು ಶಿವಸೇನೆಯ ಸಂಜಯ್ ರಾವುತ್ ರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ ಮತ್ತು ಸೂಕ್ತ  ಕಾನೂನು ಕ್ರಮಕ್ಕೆ ಒತ್ತಾಯಿಸಿದೆ. 

ಮುಸ್ಲಿಮರಿಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟದ ಹೆಸರಿನಲ್ಲಿ ವೋಟ್ ಬ್ಯಾಂಕ್ ರಾಜಕೀಯವನ್ನು ಮಾಡಲಾಗುತ್ತಿದೆ, ಮುಸ್ಲಿಮರ ಶೈಕ್ಷಣಿಕ ಹಾಗೂ ಆರೋಗ್ಯ ಸ್ಥಿತಿ-ಗತಿಯನ್ನು ರಾಜಕೀಯಕ್ಕೆ ಬಳಸಲಾಗುತ್ತಿದೆಯೆಂದು ಶಿವಸೇನೆಯ ಸಂಜಯ್ ರಾವುತ್ ರವರ ಕಾನೂನು ವಿರೋಧಿ ಹೇಳಿಕೆಯನ್ನು ಖಂಡಿಸಿ ಎಸ್.ಡಿ.ಪಿ.ಐ ರಾಜ್ಯ ಕಾರ್ಯಕಾರಣಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಶಿವಸೇನೆಯ ಬೇಜವಾಬ್ದಾರಿ ಹೇಳಿಕೆಯು ಪ್ರಜಾಪ್ರಭುತ್ವ ದೇಶಕ್ಕೆ ಮಾಡಿದ ಅಪಮಾನವಾಗಿದೆ. ಸಂವಿಧಾನ ಬದ್ಧ ರಾಷ್ಟ್ರದಲ್ಲಿ ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡುತ್ತಿರುವ ವ್ಯಕ್ತಿಗಳÀ ಮೇಲೆ ಸರಕಾರವು ಸ್ವಯಂ ಪ್ರೇರಿತವಾಗಿ ಕಠಿಣ ಕಾನೂನು ಕ್ರಮವನ್ನು ಪಡೆಯಬೇಕೆಂದು ಅಬ್ದುಲ್ ಮಜೀದ್ ಪತ್ರಿಕಾ ಹೇಳಿಕೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.

Bangalore; Shiva Sena leader Sanjay Raut on Sunday said the voting rights of Muslims should be revoked. Condemning this act social democratic party of india has appealed for strict action against shiva sena.
Vote bank is used in the name of Fighting against the injustice happening to muslims. Education and health of muslims are used as the subject of vote bank politics says sanjay raut. This statement of shiv sena leader is against the constitution of india. Indian constitution gives right to every citizen of india to vote, live and follow his religion. According to the president of SDPI abdul majeed this sentence of shiva sena leader is an insult to the democracy. In a country such as india which runs on democracy the government should take a very strict action on such anti democracy statement says abdul majeed in a press release