ಪೋಲಿಸರಿಂದ ‘ಸಾಮಾಜಿಕ ನ್ಯಾಯ ದಿನ’ ಕಾರ್ಯಕ್ರಮಕ್ಕೆ ನಿರಾಕರಣೆ: ಎಸ್.ಡಿ.ಪಿ.ಐ ಖಂಡನೆ

ಬೆಂಗಳೂರು: ಇಂದು ಡಾ! ಬಿ.ಆರ್ ಅಂಬೇಡ್ಕರ್ ರವರ ಜನ್ಮ ದಿನದ ಅಂಗವಾಗಿ ರಾಜ್ಯಾದ್ಯಂತ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ವು  “ಅಂಬೇಡ್ಕರ್ ರವರ ಕನಸಿನ ರಾಷ್ಟ್ರ ಕಟ್ಟೋಣ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ಸಾಮಾಜಿಕ ನ್ಯಾಯ ದಿನ ವನ್ನಾಗಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದರ ಅಂಗವಾಗಿ ಚಾಮರಾಜನಗರದಲ್ಲಿ ಸಾರ್ವಕನಿಕ ಕಾರ್ಯಕ್ರಮವನ್ನೂ ಹಮ್ಮಿಕೊಂಡಿತ್ತು. ಆದರೆ ದುರಾದೃಷ್ಠಾವಶಾತ್ ಈ ಕಾರ್ಯಕ್ರಮಕ್ಕೆ ಪೋಲಿಸ್ ಇಲಾಖೆಯು ನ್ಯಾಯ ನಿರಾಕರಿಸಿದ್ದನ್ನು ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಸಮಿತಿ ತ್ರೀವ್ರವಾಗಿ ಖಂಡಿಸಿದೆ.

ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಪ್ರತಿಕ್ರಿಯಿಸಿ, ಪೋಲಿಸರ ಸಂವಿಧಾನ ವಿರೋಧಿ ನಡವಳಿಕೆಯೂ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಇದು ಸಮಾಜ ಬಾಹಿರ ಕೃತ್ಯವಾಗಿದ್ದು, ಸರಕಾರ ಕೂಡಲೇ ಉನ್ನತ ತನಿಖೆಯನ್ನು ನಡೆಸಬೇಕು. ಈ ಬಗ್ಗೆ ಮಾನ್ಯ ಗ್ರಹ ಮಂತ್ರಿಗಳಿಗೆ ಮತ್ತು ಪೋಲಿಸ್ ಮಹಾ ನಿರ್ದೇಶಕರಿಗೆ ದೂರನ್ನು ನೀಡಲಾಗುವುದು. ಕಾರ್ಯಕ್ರಮಕ್ಕೆ ತಡೆಯೊಡ್ಡಿದ ಪೋಲಿಸ್ ಅಧಿಕಾರಿಗಳ ಮೇಲೆ ಸೂಕ್ರ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಅಬ್ದುಲ್ ಮಜೀದ್  ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.