ಬೆಂಗಳೂರು: ನಗರದ ವೆಂಕಟೇಶಪುರಂನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನ ರಾಜ್ಯ ಪ್ರಧಾನ ಕಛೇರಿಯ ಉದ್ಘಾಟನೆ ಸಮಾರಂಭವು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಟಿ.ಯುನ ರಾಜ್ಯಾಧ್ಯಕ್ಷರಾದ ಅಬ್ದುಲ್ ಜಲೀಲ್ ಕೃಷ್ಣಪುರರವರು ವಹಿಸಿದರು. ರಾಜ್ಯಾಧ್ಯಕ್ಷರಿಂದ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಸ್.ಡಿ.ಪಿ.ಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಎಸ್.ಡಿ.ಟಿ.ಯುನ ರಾಷ್ಟ್ರೀಯ ಸಂಚಾಲಕರು ಅಬ್ದುಲ್ ಮಜೀದ್ ಫೈಝಿರವರು ಕಛೇರಿ ಉದ್ಘಾಟಣೆ ನೆರೆವರಿಸಿದರು. ಕಾರ್ಯಕ್ರಮದ ಸ್ವಾಗತವನ್ನು ಎಸ್.ಡಿ.ಟಿ.ಯುನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಫಜಲುಲ್ಲಾ ಎಂ.ಎರವರು ಮಾಡಿದರು.
ಉದ್ಘಾಟನೆ ನಂತರ ಅಬ್ದುಲ್ ಮಜೀದ್ ಫೈಝಿರವರು ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ಭಾರತದ ಇತಿಹಾಸದಲ್ಲಿ ಕಾರ್ಮಿಕ ಯೂನಿಯನ್ ಬೆಳವಣಿಗೆಯ ಬಗ್ಗೆ ವಿಶ್ಲೇಷಿಸಿದರು. ಮುಖ್ಯ ಅತಿಥಿಗಳ ಪೈಕಿ ಮಾತನಾಡಿದ ಹಿರಿಯ ವಕೀಲರು ಹಾಗೂ ಎನ್.ಸಿ.ಹೆಚ್.ಆರ್.ಒನ ರಾಜ್ಯಾಧ್ಯಕ್ಷರಾದ ಎಸ್. ಬಾಲನ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ಬಗ್ಗೆ ವಿಶ್ಲೇಸಿದರು, ಯೂನಿಯನ್ ನ ಬಲ ಮತ್ತು ಒಗ್ಗಟ್ಟಿನಿಂದ ಮಾತ್ರ ಬದಲಾವಣೆ ಸಾಧ್ಯ ಎಂದ ಅವರು ಎಸ್.ಡಿ.ಟಿ.ಯು ಈ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಎಸ್.ಡಿ.ಪಿ.ಐ ಪಕ್ಷದ ರಾಜ್ಯಾಧ್ಯಕ್ಷರಾದ ಮೆಹಬೂಬ್ ಅವಾದ್ ಶರೀಫ್ರವರು ತಮ್ಮ ಭಾಷಣದಲ್ಲಿ ಕಾರ್ಮಿಕ ಸಮಸ್ಯೆ ಹಾಗೂ ಅದರ ಪರಿಹಾರ ಯೂನಿಯನ್ ನಿಂದ ಮಾತ್ರ ಸಾಧ್ಯ ಎಂಬುದನ್ನು ಒತ್ತಿ ಹೇಳಿದರು. ಎಸ್.ಡಿ.ಟಿ.ಯುನ ನಿಕಟ ಪೂರ್ವ ಅಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯರವರು ರಾಜಕೀಯ, ಪರಿಹಾರವೇ ಹೊರತು ಸಮಸ್ಯೆ ಅಲ್ಲ ಎಂದು ಹೇಳುತ್ತಾ ಇಂದಿನ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯುವಲ್ಲಿ ಯೂನಿಯನ್ನ ಪಾತ್ರ ಏನು? ಎನ್ನುವ ನಿಲುವುವನ್ನು ತೋಡಿಕೊಂಡರು.
ಕೊನೆಯಲ್ಲಿ ಅಧ್ಯಕ್ಷತೆ ಭಾಷಣ ಮಾಡಿದ ಜಲೀಲ್ ಕೃಷ್ಣಪುರರವರು ಯೂನಿಯನ್ ಹಾಗೂ ಅದರ ಇಂದಿನ ಅವಶ್ಯಕತೆ ಮತ್ತು ಬೆಳವಣಿಗೆಯಲ್ಲಿ ಕಾರ್ಮಿಕ ನ ಪಾತ್ರ ಏನು? ಎನ್ನುವ ಬಗ್ಗೆ ಪ್ರಸ್ಥಾಪಿಸಿದರು. ರಾಜ್ಯದ ಕೇಂದ್ರ ಕಛೇರಿ ಉದ್ಘಾಟನೆ ಸಮಾರಂಭದ ಶುಭಾಕಾಮನೆಗಳನ್ನು ನೀಡುತ್ತಾ ತಮ್ಮ ಭಾಷಣವನ್ನು ಮುಕ್ತಾಯ ಗೊಳಿಸಿದರು.
No Comments