ಬೆಂಗಳೂರು, 25/07/2016: ನಗರದ ಟೌನ್ಹಾಲ್ ಮುಂದೆ ಗುಜರಾತ್ ನ ಉನಾ ಹಾಗೂ ರಾಜ್ಯದ ಚಿಕ್ಕಮಗಳೂರಿನಲ್ಲಿ ದಲಿತ ದೌರ್ಜನ್ಯ ಪ್ರಕರಣದ ಉನ್ನತ ಮಟ್ಟದ ತನಿಖೆ ನಡೆಸುವ ಬಗ್ಗೆ ಮತ್ತು ಬಿ.ಎಸ್.ಪಿ ನಾಯಕಿ ಮಾಯಾವತಿ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿರುವ ಉತ್ತರ ಪ್ರದೇಶದ ಬಿ.ಜೆ.ಪಿ ರಾಜ್ಯ ಉಪಾಧ್ಯಕ್ಷನನ್ನು ಬಂಧಿಸುವಂತೆ ಎಸ್.ಡಿ.ಪಿ.ಐ ಪ್ರತಿಭಟನೆ.

ಕೇಂದ್ರದಲ್ಲಿ ನರೇಂದ್ರ ಮೋದಿಯ ಬಿ.ಜೆ.ಪಿ ಸರಕಾರವು ಅಸಿತ್ವಕ್ಕೆ ಬಂದ ನಂತರ ದಲಿತರ ಮೇಲೆ ಹಾಗೂ ಅಲ್ಪಸಂಖ್ಯಾತರ ಮೇಲೆ ಒಂದಿಲ್ಲೊಂದು ಕಡೆ ದೌರ್ಜನ್ಯ ನಡೆಯುತ್ತಲೇ ಒಂದಿದೆ. ಮಹಾರಾಷ್ಟ್ರದಲ್ಲಿ ಬಿ.ಜೆ.ಪಿ ಸರ್ಕಾರವು ಅಂಬೇಡ್ಕರ್ ಸ್ಮಾರಕವನ್ನು ನೆಲಸಮಗೊಳಿಸುವುದು ಒಂದು ಕಡೆಯಾದರೆ. ಬಿ.ಜೆ.ಪಿಯ ಹಿಂಬಾಲಕರು, ಗೋರಕ್ಷಣೆಯ ನೆಪದಲ್ಲಿ ನರಭಕ್ಷಣೆಯನ್ನು ಮಾಡಲು ಹೊರಟಂತಿದೆ. ಇಂತಹ ಘಟನೆಗಳು ಗುಜರಾತ್ನಲ್ಲಿ ಮಾತ್ರವಲ್ಲದೆ ಈ ಹಿಂದೆ ಹರ್ಯಾಣದಲ್ಲೂ, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲೂ ನಡೆದಿರುತ್ತದೆ. ಈ ನಕಲಿ ಗೋರಕ್ಷಕರು ಗೋ ಪ್ರೇಮದ ಹೆಸರಿನಲ್ಲಿ ಉತ್ತರ ಪ್ರದೇಶ ದಾದ್ರಿಯಲ್ಲಿ ಅಖ್ಲಾಕ್ ಎಂಬ ವ್ಯಕ್ತಿಯನ್ನು ಕೊಂದು ಆತನ ಕುಟುಂಬದ ಮೇಲೆಯೇ ಮೊಕದ್ದಮೇ ದಾಖಲಿಸಲು ಒತ್ತಾಯಿಸಿದ್ದು ಹಾಗೂ ಈ ಘಟನೆಯ ಬಗ್ಗೆ ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳ ನಡೆಯೂ ಜನಸಮಾನ್ಯರಿಗೆ ಕಾನೂನಿನ ಮೇಲೆ ಇರುವ ನಂಬಿಕೆಯೇ ಹೊರಟು ಹೋಗುವಂತೆ ಮಾಡಿರುತ್ತದೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ ಕೂಡಾ ಕೇಂದ್ರ ಸರ್ಕಾರವು ಮೌನಕ್ಕೆ ಶರಣಾಗಿರುವುದನ್ನು ಕಂಡರೆ ಈ ದೇಶದಲ್ಲಿ ಮನುಷ್ಯರಿಗಿಂತ ಹೆಚ್ಚಾಗಿ ಜಾನುವಾರುಗಳಿಗೆ ಪ್ರಾಶಸ್ತ್ಯ ನೀಡುವುದನ್ನು ಕಂಡುಬರುತ್ತದೆ. ಈ ಮೂಲಕ ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವಾಗಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಗುರಿಗೆ ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿಗಳು ಬಲಿಪಶುಗಳಾಗುತ್ತಿದ್ದಾರೆ. ಹೈದರಾಬಾದ್ ರೋಹಿತ್ ವೇಮುಲಾ ಆತ್ಮಾಹತ್ಯೆ, ಕನ್ಹಯ್ಯ ಕುಮಾರ್ನ ಮೇಲಿನ ಸುಳ್ಳು ಮೊಕದ್ದಮೆ ದಾಖಲು ಪ್ರಕರಣ, ಝಾಕಿರ್ ನಾಯಕ್ ಮೇಲಿನ ಭಯೊತ್ಪಾದನೆ ಅರೋಪ ಮತ್ತು ಯು.ಎ.ಪಿ.ಎ ಅಳವಡಿಸುವ ಸಮಾಲೋಚನೆಗಳೆಲ್ಲವೂ ಕೂಡಾ ಸಂಘಪರಿವಾರದ ಹಿಡಿತದಲ್ಲಿ ಕೇಂದ್ರ ಸರಕಾರ ಇದೆ ಇನ್ನುವುದರ ಸ್ಪಷ್ಟ ಉದಾಹರಣೆಗಳಾಗಿರುತ್ತದೆ.

ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್ ಕೆ ರವರು ಮಾತನಾಡುತ್ತಾ ಗುಜರಾತ್ ರಾಜ್ಯದ ಸೋಮನಾಥ ಜಿಲ್ಲೆಯ ಉನಾದ ಹಾಗೂ ರಾಜ್ಯದ ಚಿಕ್ಕಮಗಳೂರಿನಲ್ಲಿ ಭಜರಂಗದಳದ ಗೂಂಡಾಗಳು ಗೋ ರಕ್ಷಣೆಯ ಹೆಸರಿನಲ್ಲಿ ನಡೆಸಿದ ದಲಿತರ ದೌರ್ಜನ್ಯ ಪ್ರಕರಣವು ಇಡೀ ದೇಶವೇ ಜಗತ್ತಿನ ಮುಂದೆ ತಲೆ ತಗ್ಗಿಸುವ ಘಟನೆಯಾಗಿರುತ್ತದೆ. ಈ 2 ಘಟನೆಗಳು ಸಂವಿಧಾನ ವಿರೋಧಿಯಾಗಿದ್ದು ದೇಶದ್ರೋಹದ ಚುಟುವಟಿಕೆ ಯಾಗಿರುತ್ತದೆ ಹಾಗೂ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ ಹಾಗೂ ಬಿ.ಎಸ್.ಪಿ ನಾಯಕಿ ಮಾಯಾವತಿಯವರನ್ನು ವೇಶ್ಯೆಗೆ ಹೋಲಿಸುವ ಉತ್ತರ ಪ್ರದೇಶದ ಬಿ.ಜೆ.ಪಿ ರಾಜ್ಯ ಉಪಾಧ್ಯಕ್ಷ ದಯಾಶಂಕರ್ ಸಿಂಗ್ನ ಹೇಳಿಕೆಯು ಕೂಡಾ ಒಟ್ಟು ಮಹಿಳೆಯರ ಮೇಲೆ ಮಾಡಿರುವ ಅವಮಾನವಾಗಿರುತ್ತದೆ. ಆದ್ದರಿಂದ ಈ ಎರಡು ಘಟನೆಗಳನ್ನು ದೇಶದ ಜನತೆಯಾಗಲೀ, ಭಾರತದ ಸಂವಿಧಾನವಾಗಲೀ ಮತ್ತು ಕಾನೂನಾಗಲೀ ಯಾವತ್ತು ಕ್ಷಮಿಸಲು ಸಾಧ್ಯವಿಲ್ಲ. ಇವುಗಳು ಕೇವಲ ಮರೆತು ಬಿಡುವ ಘಟನೆಗಳಾಗಿರದೆ ಭಾರತದ ಮುಂದಿನ ದಾರಿಯಾವುದಿರಬೇಕು ಎಂಬ ಬಗ್ಗೆ ತೀರ್ಮಾನವಾಗುವ ಅಂಶಗಳು ಇದರಲ್ಲಿ ಅಡಕವಾಗಿದೆ. ಡಾ|| ಬಿ.ಆರ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ದಾರಿಯಲ್ಲಿ ದೇಶ ಸಾಗಬೇಕೋ ಅಥವಾ ಸಾವರ್ಕರ್ ಮತ್ತು ಗೋಲ್ವಾಲ್ಕರ್ನ ಮನುವಾದತ್ತ ಸಾಗಬೇಕೋ ಎಂಬುದರ ಸ್ಪಷ್ಟತೆಯನ್ನು ಕೇಂದ್ರ ಸರ್ಕಾರ ದೇಶದ ಜನತೆ ತಿಳಿಸಿ ಕೊಡುವ ಅಗತ್ಯವಿದೆ ಎಂದರು.

ಗುಜರಾತ್ ನ ಉನಾ ಹಾಗೂ ರಾಜ್ಯ ಚಿಕ್ಕಮಗಳೂರಿನಲ್ಲಿ ನಡೆದಿರುವ ದಲಿತ ದೌರ್ಜನ್ಯ ಪ್ರಕರಣದ ಉನ್ನತ ಮಟ್ಟದ ತನಿಖೆಯನ್ನು ನಡೆಸಿ ತಪ್ಪಿತಸ್ಥರ ಮೇಲೆ ದೇಶದ್ರೋಹದ ಮೊಕದ್ದಮೆಯನ್ನು ದಾಖಲಿಸಬೇಕು. ಹಾಗೂ ಬಿ.ಎಸ್.ಪಿ ನಾಯಕಿ ಮಾಯಾವತಿಯ ವಿರುದ್ಧ ಮಾನಹಾನಿಕರ ರೀತಿಯಲ್ಲಿ ಹೇಳಿಕೆ ನೀಡಿರುವ ಉತ್ತರ ಪ್ರದೇಶದ ಬಿ.ಜೆ.ಪಿ ರಾಜ್ಯ ಉಪಾಧ್ಯಕ್ಷ ದಯಾಶಂಕರ್ ವಿರುದ್ಧವೂ ಕೂಡಾ ಅತ್ಯಂತ ಕಠಿಣವಾದ ಕಾನೂನು ಕ್ರಮವನ್ನು ಕೈಗೊಂಡು ಬಂಧಿಸಿ ಮಾದರಿಯುತವಾಗಿ ಶಿಕ್ಷಿಸಬೇಕೆಂದು ಈ ಮೂಲಕ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವು ಪ್ರತಿಭಟನೆಯ ಮೂಲಕ ಆಗ್ರಹಿಸಿದೆ.

ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ಪಕ್ಷದ ರಾಷ್ಟ್ರ ಪ್ರಧಾನ ಕಾರ್ಯದರ್ಶಿ ಅಫ್ಸರ್ ಪಾಶಾ, ರಾಜ್ಯ ಕಾರ್ಯಧ್ಯಕ್ಷರು ಅಬ್ದುಲ್ ಹನ್ನಾನ್, ರಾಜ್ಯ ಉಪಾಧ್ಯಕ್ಚರು ದೇವನೂರು ಪುಟ್ಟನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ರಾಜ್ಯ ಕಾರ್ಯದರ್ಶಿ ಅಫ್ಸರ್ ಕೆ, ಬಿ.ಎಸ್.ಪಿ ಪಕ್ಷದ ಕೇಂದ್ರ ಸಮಿತಿ ಸದಸ್ಯರು ಹಾಗೂ ರಾಜ್ಯ ಉಸ್ತುವಾರಿಗಳಾದ ಮಾರಸಂದ್ರ ಮುನಿಯಪ್ಪ, ಬಿ.ಎಸ್.ಪಿ ಪಕ್ಷದ ರಾಜ್ಯ ಪದಾಧಿಕಾರಿಗಳು, ಟಿಪ್ಪು ಯುನೈಟೆಡ್ ಫ್ರಂಟ್ನ ಸದರ್ಾರ್ ಖುರೈಶಿ, ದಲಿತ ಮತ್ತು ಮೈನಾರಿಟಿ ಸೇನೆಯ ಎ.ಜೆ ಖಾನ್ ಬೆಂಗಳೂರು ಜಿಲ್ಲಾಧ್ಯಕ್ಷರು ಫಯಾಝ್ ಅಹಮದ್ ಹಾಗೂ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶರೀಫ್ ಹಾಗೂ ವಿವಿಧ ದಲಿತ ಸಂಘಟನೆಯ ಮುಖಂಡರು ಮತ್ತು ಪ್ರತಿಗಪರ ಚಿಂತಕರು ಉಪಸ್ಥಿತರಿದ್ದರು.