ಬೆಂಗಳೂರು: ಆಥರ್ಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಹೆಣ್ಣು ಮಕ್ಕಳಿಗೆ, ವಿಚ್ಛೇದಿತ ಮಹಿಳೆಯರಿಗೆ ಮತ್ತು ವಿಧವೆಯರಿಗೆ ವೈಯಕ್ತಿಕ ಹಾಗೂ ಸಾಮೂಹಿಕ ಮದುವೆ ಕಾರ್ಯಗಳಿಗೆ ಸಹಾಯಧನ ಪಾವತಿಸುವ ಸಂಬಂಧ ರಾಜ್ಯ ಸಕರ್ಾರ ಬಿದಾಯಿ ಯೋಜನೆ ಜಾರಿ ಮಾಡಿದರೂ ಇದನ್ನು ಕಾರ್ಯರೂಪಕ್ಕೆ ತರಲು ರಾಜ್ಯ ಸಕರ್ಾರ ವಿಫಲವಾಗಿದೆ ಎಂದು ಆರೋಪಿಸಿ ಇದಕ್ಕರ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಎಸ್.ಡಿ.ಪಿ.ಐಯು ಮನವಿ ಪತ್ರವನ್ನು ಸಲ್ಲಿಸಿತು
2015-16ನೇ ಸಾಲಿನಲ್ಲಿ ರಾಜ್ಯದಾದ್ಯಂತ ಅಲ್ಪಸಂಖ್ಯಾತ ಸಮುದಾಯದ ಸುಮಾರು 12 ಸಾವಿರ ಬಡ ಹೆಣ್ಣು ಮಕ್ಕಳು ಈ ಯೋಜನೆಯಡಿಯಲ್ಲಿ ಅಜರ್ಿ ಸಲ್ಲಿಸಿ ಸಹಾಯಧನಕ್ಕಾಗಿ ಕಾಯುತ್ತಿದ್ದಾರೆ. ಈ ಪೈಕಿ ಕೆಲ ಅಜರ್ಿದಾರರಿಗೆ ಸುಮಾರು ಒಂದು ವರ್ಷ ಕಳೆದಿರುವ ಪ್ರಸಂಗವು ಇದೆ. ಸಕರ್ಾರ ನೀಡುವ ಸಹಾಯಧನದ ಭರವಸೆ ಅಧಾರದ ಮೇಲೆ ಬಡ ಪೋಷಕರು ಈಗಾಗಲೇ ಸಾಲ ಮಾಡಿ ತಮ್ಮ ಹೆಣ್ಣು ಮಕ್ಕಳ ಮದುವೆ ಮುಗಿಸಿರುತ್ತಾರೆ. ಸಹಾಯಧನ ನಿದರ್ಿಷ್ಠ ಸಮಯದಲ್ಲಿ ಸಿಗದ ಕಾರಣ ಬಡ್ಡಿ-ಚಕ್ರ ಬಡ್ಡಿ ಸಿಲುಕಿ ಹಾಕಿ ಕೊಂಡಿರುವ ಬಡ ಪೋಷಕರು ಆಯಾಯ ಜಿಲ್ಲೆಯ ಬಿ.ಸಿ.ಎಂ ಕಛೇರಿಗೆ ಅಲೆದಾಡುತ್ತಿರುವುದನ್ನು ನೋಡಿದರೆ ಎಂತವರಿಗೂ ಮನ ಕಲಕುತ್ತದೆ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇರುವ ಈ ಯೋಜನೆಗಳು ಎಷ್ಟರ ಮಟ್ಟಿಗೆ ಪ್ರಗತಿ ಕಂಡಿದೆ ಎಂಬುದು ಎಸ್.ಡಿ.ಪಿ.ಐಯ ಪ್ರಶ್ನೆಯಾಗಿದೆ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಆಗುತ್ತಿರುವ ವಿಳಂಬ ನೀತಿಯ ಈ ಆಮೆಗತಿ ಪ್ರಕ್ರಿಯೆಯನ್ನು ಎಸ್.ಡಿ.ಪಿ.ಐ ಖಂಡಿಸುತ್ತದೆ ಮತ್ತು ವಿಳಂಬ ಪ್ರಕ್ರಿಯೆಯನ್ನು ಸರಿಪಡಿಸಬೇಕೆಂದು ರಾಜ್ಯ ಸಕರ್ಾರಕ್ಕೆ ಆಗ್ರಹಿಸುತ್ತದೆ. ಒಟ್ಟಾರೆ ರಾಜ್ಯದಾದ್ಯಂತ ಬಿದಾಯಿ ಯೋಜನೆಯಡಿಯಲ್ಲಿ ಅಜರ್ಿ ಸಲ್ಲಿಸಿ ಜಾತಕಪಕ್ಷಿಗಳಂತೆ ಕಾಯುತ್ತಿರುವ ಬಡ ಪೋಷಕರ ಕಷ್ಟ ನಿವಾರಿಸುವ ನಿಟ್ಟಿನಲ್ಲಿ ತಕ್ಷಣ ಈ ಸಂಬಂಧ ರಾಜ್ಯ ಸಕರ್ಾರ ಕ್ರಮ ಜರುಗಿಸಿ ಅರ್ಹ ಫಲಾನುಭವಿಗಳಿಗೆ ಸಹಾಯಧನ ಮಂಜೂರು ಮಾಡಬೇಕೆಂದು ಈ ಮೂಲಕ ನಾಡಿನ ಸಮಸ್ತ ಅಲ್ಪಸಂಖ್ಯಾತ ಸಮುದಾಯದ ಪರವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾಟರ್ಿ ಆಫ್ ಇಂಡಿಯಾ ರಾಜ್ಯ ಸಕರ್ಾರಕ್ಕೆ ಮನವಿ ಪತ್ರದ ಮೂಲಕ ಆಗ್ರಹಿಸುತ್ತದೆ.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದಶರ್ಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಮಾಧ್ಯಮ ವಕ್ತಾರ ಅಬ್ರಾರ್ ಅಹಮದ್ ಮತ್ತು ರಾಜ್ಯ ಸಮಿತಿ ಸದಸ್ಯರು ಜಾವೇದ್ ಆಝಂ ರವರು ಉಪಸ್ಥಿತರಿದ್ದರು.
No Comments