ಮೈಸೂರು 21/06/2016: ಎಸ್.ಡಿ.ಪಿ.ಐ ಪಕ್ಷದ 8ನೇ ಸಂಸ್ಥಾಪಕ ದಿನದ ಅಂಗವಾಗಿ ಎಸ್.ಡಿ.ಪಿ.ಐ ಜಿಲ್ಲಾ ಕಛೇರಿಯಲ್ಲಿ ಪಕ್ಷದ ‘ಧ್ವಜಾರೋಹಣ’ ಹಾಗೂ ಟಿಪ್ಪು ಉದ್ಯಾನವನದಲ್ಲಿ ‘ವನಮಹೋತ್ಸವ’ ಕಾರ್ಯಕ್ರಮವನ್ನು ಆಚರಿಸಲಾಯಿತು. ಪಕ್ಷದ ಸ್ಥಾಪಕಾಧ್ಯಕ್ಷರಾದ ಇ.ಅಬೂಬಕರ್ರವರು ಧ್ವಜಾರೋಹಣ ನೇರವೆರಿಸಿ ಟಿಪ್ಪು ಉದ್ಯಾನವನದಲ್ಲಿ ಸಸಿ ನೆಡುವಿಕೆಯ ಮೂಲಕ ಕಾರ್ಯಕ್ರಮ ಉಧ್ಘಾಟಿಸಿ, ನಂತರ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾಥರ್ಿಗಳನ್ನು ಸನ್ಮಾನಿಸಿದರು.
ಸಂಸ್ಥಾಪಕ ದಿನದ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷರಾದ ಇ.ಅಬೂಬಕರ್ರವರು ಕಾರ್ಯಕರ್ತರನ್ನು ಉದ್ದೇಶಿಸಿ 7 ವರ್ಷಗಳಿಲ್ಲಿ ಪಕ್ಷದ ಬೆಳವಣಿಗೆಯ ಬಗ್ಗೆ ವಿವಿರಿಸುತ್ತಾ ಪ್ರಸಕ್ತ ದೇಶದಲ್ಲಿ ಒಂದು ಕಡೆ ಕೋಮುವಾದ ಬಲಿಷ್ಟವಾಗಿದ್ದು ಇನ್ನೊಂದಡೆ ಜಾತ್ಯಾತೀತ ಪಕ್ಷಗಳು ತಮ್ಮ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ ಸ್ವಜನಪಕ್ಷಪಾತ, ಭ್ರಷ್ಟಾಚಾರ, ದುರಾಡಳಿತ ನಡೆಸುತ್ತಿರುವುದು ಬಹಳ ದುರದೃಷ್ಟಕರವಾದ ಸಂಗತಿಯಾಗಿದ್ದು ಇಂತಹ ಸಂದರ್ಭದಲ್ಲಿ ದೇಶದಲ್ಲಿ ಬಲಿಷ್ಠವಾದ ಕೋಮುವಾದವನ್ನು ಸೊಲಿಸುವ ಹಾಗೂ ಜನರ ನೈಜ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮೌಲ್ಯಧಾರಿತ ರಾಜಕಾರಣದ ಅಗತ್ಯವಿದ್ದು, ಈ ಜವಾಬ್ದಾರಿಯನ್ನು ಎಸ್.ಡಿ.ಪಿ.ಐನ ಎಲ್ಲಾ ಸದಸ್ಯರು, ಕಾರ್ಯಕರ್ತರು ಹಾಗೂ ನಾಯಕರು ಜವಾಬ್ದಾರಿಯುತವಾಗಿ ನಿಭಾಯಿಸಬೇಕಾಗಿದೆ. ಪ್ರಸಕ್ತ ಪಕ್ಷವು 22 ರಾಜ್ಯಗಳಲ್ಲಿ ಸಕ್ರಿಯವಾಗಿ ಕಾರ್ಯನಿರತವಾಗಿದ್ದು, ಈಗ ಪಕ್ಷವು ಸಂಘಟನಾ ರಾಜಕೀಯದ ಜೊತೆಗೆ ಚುನಾವಣಾ ರಾಜಕೀಯ ದತ್ತ ಹೊರಳಬೇಕಾಗಿದ್ದು ಚುನಾವಣೆಯಲ್ಲಿ ಯಶಸ್ಸಿನ ಮೂಲಕ ಭಯ ಹಾಗೂ ಹಸಿವು ಮುಕ್ತ ಇಂಡಿಯಾ ನಿಮರ್ಾಣದ ಗುರಿಯನ್ನು ಎಸ್.ಡಿ.ಪಿ.ಐ ತನ್ನ ಹೆಗಲ ಮೇಲೆ ಹೊತ್ತಿದೆ. ಎಂದರು.
ಕಾರ್ಯಕ್ರಮದಲ್ಲಿ ಪಕ್ಷದ ಮೈಸೂರು ಉಸ್ತುವಾರಿ ಹಾಗೂ ರಾಜ್ಯ ಪ್ರಧಾನ ಕಾರ್ಯದಶರ್ಿ ಅಬ್ದುಲ್ ಮಜೀದ್ರವರು ಜನಪರ ಹೋರಾಟಗಳನ್ನು ಮತ್ತಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ ಕಠಿಣ ಪರಿಶ್ರಮದ ಮೂಲಕ ಪಕ್ಷವನ್ನು ಯಶಸ್ಸಿನತ್ತ ಕೊಂಡಯ್ಯಲು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯಾ ಪ್ರಧಾನ ಕಾರ್ಯದಶರ್ಿಗಳಾದ ಇಲ್ಯಾಸ್ ಮಹಮ್ಮದ್ ತುಂಬೆ ಹಾಗೂ ಅಫ್ಸರ್ ಪಾಶಾ, ರಾಜ್ಯ ಕಾರ್ಯಧ್ಯಕ್ಷರಾದ ಅಬ್ದುಲ್ ಹನ್ನಾನ್, ರಾಜ್ಯ ಉಪಾಧ್ಯಕ್ಷರುಗಳಾದ ಪ್ರೊ|| ಶಬ್ಬೀರ್ ಮುಸ್ತಫಾ ಹಾಗೂ ದೇವನೂರು ಪುಟ್ಟನಂಜಯ್ಯ, ಪ್ರಧಾನ ಕಾರ್ಯದಶರ್ಿಗಳಾದ ಲತೀಫ್, ಎಸ್.ಡಿ.ಟಿ.ಯು ರಾಜ್ಯ ಸಮಿತಿ ಸದಸ್ಯರಾದ ಅಲೂರು ಮಲ್ಲಣ್ಣ, ಮೈಸೂರು ಜಿಲ್ಲಾಧ್ಯಕ್ಷರಾದ ಎಂ.ಎಫ್ ಕಲೀಂ ಸೇರಿದಂತೆ ಜಿಲ್ಲಾ ನಾಯಕರು, ಕಾರ್ಯಕರ್ತರು, ಸದಸ್ಯರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.
No Comments