ಚಾಮರಾಜನಗರ: ಸಾಮಾಜಿಕ ನ್ಯಾಯ ದಿನದಂದೇ ಕಾರ್ಯಕ್ರಮಕ್ಕೆ ಪೋಲಿಸರಿಂದ ಅಡ್ಡಿ : ಎಸ್.ಡಿ.ಪಿ.ಐ ಯಿಂದ ಪ್ರತಿಭಟನೆ

 

ಚಾಮರಾಜನಗರ, ಎ.14: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಾಮರಾಜನಗರ ಜಿಲ್ಲಾ ಸಮಿತಿ ವತಿಯಿಂದ ಚಾಮರಾಜನಗರದಲ್ಲಿ ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ “ಅಂಬೇಡ್ಕರ್ ರವರ ಕನಸಿನ ರಾಷ್ಟ್ರ ಕಟ್ಟೋಣ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ‘ಸಾಮಾಜಿಕ ನ್ಯಾಯ ದಿನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
 ಈ ಕಾರ್ಯಕಮವನ್ನು ಬಹಿರಂಗವಾಗಿ ನಡೆಸಬಾರೆಂದು ಜಿಲ್ಲಾ ಪೋಲಿಸ್ ಇಲಾಖೆಯೂ ಕಾರ್ಯಕ್ರಮಕ್ಕೆ ತಡೆಯೊಡ್ಡಿತ್ತು. ಈ ರೀತಿಯ ಸಂವಿಧಾನ ವಿರೋಧಿ ಕ್ರಮವನ್ನು ಪ್ರಶ್ನಿಸಿ ಜಿಲ್ಲಾಧ್ಯಕ್ಷರಾದ ಅಬ್ರಾರ್ ಅಹ್ಮದ್ ನೇತೃತ್ವದಲ್ಲಿ ಚಾಮರಾಜನಗರ ಪಟ್ಟಣ ಪೋಲಿಸ್ ಠಾಣೆಯ ಮುಂಭಾಗ ನೂರಾರು ಕಾರ್ಯಕರ್ತರು, ದಲಿತರು, ಸಾರ್ವಜನಿಕರ ಸಮ್ಮಿಲನದಲ್ಲಿ ಬೃಹತ್ ಪ್ರತಿಭಟನೆಯನ್ನು ಕೈಗೊಂಡಿತ್ತು. ಈ ವೇಳೆ ಜಿಲ್ಲಾ ಡಿವೈಎಸ್ಪಿ ಮಹಂತೇಶ ಉದ್ಯಾನಮಠ ಹಾಗೂ ವೃತ್ತ ನಿರೀಕ್ಷಣಾ ಅಧಿಕಾರಿಗಳಾದ ಗೋವಿಂದ ರಾಜ್ ರವರು ಕಾರ್ಯಕ್ರಮಕ್ಕೂ ತಡೆಯೊಡ್ಡಿ, ಪ್ರತಿಭಟನೆಗೂ ನ್ಯಾಯ ನಿರಾಕರಿಸಿ ಪ್ರತಿಭಟನಾಕಾರರನ್ನು ಬಲವಂತವಾಗಿ ಬಂಧಿಸಿತು.
ಪೋಲಿಸರ ಸಮಾಜ ವಿರೋಧಿ ಕೃತ್ಯವನ್ನು ಖಂಡಿಸಿ ಮಾಧ್ಯಮದೊಂದಿಗೆ ಮಾತನಾಡಿದ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅಬ್ರಾರ್ ಅಹ್ಮದ್, “ಈ ಕೃತ್ಯವು ಸಂವಿಧಾನ ಶಿಲ್ಪಿ ಡಾ! ಬಿ.ಆರ್ ಅಂಬೇಡ್ಕರ್ ರವರಿಗೆ ಮಾಡಿದ ಅವಮಾನವಾಗಿದೆ” ಎಂದು ಹೇಳಿ ಮಾತು ಮುಂದುವರಿಸಿದ ಅವರು, ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ದಲಿತ ಸಹೋದರರು ಕೈ ಜೋಡಿಸಿದ್ದರು ಎಂಬ ಕಾರಣಕ್ಕಾಗಿಯೇ ನಮಗಿವತ್ತು ಸಂವಿಧಾನ ಬದ್ಧವಾಗಿ ಕಾರ್ಯಕ್ರಮ ನಡೆಸಲು ನ್ಯಾಯ ನಿರಾಕರಿಸಲಾಯಿತು ಎಂಬುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹಾಗಾಗಿ ಈ ಒಂದು ಕೃತ್ಯದಲ್ಲಿ ದಲಿತರರಿಗೂ, ಸಾರ್ವಜನಿಕರಿಗೂ ಪೋಲಿಸರಿಂದ ಅವಮಾನವಾಗಿದೆ ಎಂದರು.  ಈ ಬಗ್ಗೆ ಸರಕಾರವು ಎಚ್ಚೆತ್ತುಕೊಂಡು, ಪೋಲಿಸ್ ಇಲಾಖೆಯ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಇದೇ ವೇಲೆ ಅಬ್ರಾರ್ ಅಹ್ಮದ್ ಒತ್ತಾಯಿಸಿದರು.