Coorg/Siddapur-Karnataka, 11 Dec 2016: ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ದಡ್ಡಳ್ಳಿಯ ಅರಣ್ಯದಂಚಿನಲ್ಲಿ ಕಳೆದ 6 ತಿಂಗಳಿನಿಂದ 500ಕ್ಕೂ ಹೆಚ್ಚು ಗುಡಿಸಲುಗಳನ್ನು ನಿರ್ಮಿಸಿ ವಾಸವಾಗಿದ್ದ ಗಿರಿಜನರನ್ನು ಅರಣ್ಯ ಇಲಾಖೆ ಪೊಲೀಸ್ ಸರ್ಪಕಾವಲಿನಲ್ಲಿ ಜೆಸಿಬಿ ಮೂಲಕ ಇತ್ತೀಚೆಗೆ ತೆರವುಗೊಳಿಸಿದ್ದರು. ನಿರಾಶ್ರಿತರಾಗಿರುವವರು ಇದೀಗ ಸಮೀಪದ ಆಶ್ರಮ ಶಾಲೆಯ ಮುಂಭಾಗದ ಮೈದಾನದಲ್ಲಿ ಕಳೆದ ಕೆಲವು ದಿನಗಳಿಂದ ಮೂಲಭೂತ ಸೌಲಭ್ಯದಿಂದ ವಂಚಿತರಾಗಿ ದಿನ ಕಳೆಯುತ್ತಿದ್ದಾರೆ. ಸದರಿ ಸ್ಥಳಕ್ಕೆ ಎಸ್ ಡಿ ಪಿ ಐ ಕೊಡಗು ಜಿಲ್ಲಾ ಸಮಿತಿ ಭೆಟಿ ನೀಡಿ ಗಿರಿಜನ ಮುಖಂಡರುಗಳೊಂದಿಗೆ ಚರ್ಚೆ ನಡೆಸಿ ಗಿರಿಜನರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು.

ಬಳಿಕ ಗಿರಿಜನರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಜಿಲ್ಲೆಯಲ್ಲಿ ಹಲವು ಪ್ರಭಾವಿ ವ್ಯಕ್ತಿಗಳು ಏಕರೆ ಗಟ್ಟಲೆ ಸರಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿದ್ದರೂ ಇದರ ಬಗ್ಗೆ ಕ್ರಮ ಕೈಗೊಳ್ಳದ ಸರಕಾರ ಏಕಾಏಕಿ ಗಿರಿಜನರನ್ನು ತೆರವುಗೊಳಿಸಿರುವುದು ಖಂಡನೀಯ. ಕಳೆದ ಹಲವು ತಿಂಗಳ ಹಿಂದೆ ಜಿಲ್ಲೆಯ ಹಾಡಿಗಳಲ್ಲಿ ವಾಸ್ತವ್ಯ ಹೂಡಿದ ಸಮಾಜ ಕಲ್ಯಾಣ ಸಚಿವರು ಗಿರಿಜನರಿಗೆ ಮೂಲಭೂತ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದರು. ಆದರೆ ಇದೀಗ ದೌರ್ಜನ್ಯಕ್ಕೆ ಒಳಗಾಗಿರುವ ಗಿರಿಜನರ ನೋವಿನ ಬಗ್ಗೆ ಸಚಿವರು ಯಾಕೆ ಮಾತನಾಡುತ್ತಿಲ್ಲ.

Over 500 adivasis are shelterless now; SDPI leaders held discussion with the victims, assured all sorts of legal aid

Over 500 adivasis are shelterless now; SDPI leaders held discussion with the victims, assured all sorts of legal aid

ಜಿಲ್ಲೆಯ ಶಾಸಕದ್ವೆಯರು, ಸಂಸದರು ಹಾಗೂ ಉಸ್ತುವಾರಿ ಸಚಿವರು ತಮಗೆ ಇದರ ಬಗ್ಗೆ ಮಾಹಿತಿ ಇಲ್ಲ ಎನ್ನುವುದು ನಂಬಲು ಅಸಾಧ್ಯ. ಜನಪ್ರತಿನಿಧಿಗಳ ಪೊಳ್ಳು ಭರವಸೆಗಳನ್ನು ನಂಬಬೇಡಿ ಎಂದ ಅವರು, ಕಳೆದ ಹಲವು ತಿಂಗಳ ಹಿಂದೆ ಮಡಿಕೇರಿ ಸಮೀಪದ ಕೆ. ನಿಡುಗಣೆಯಲ್ಲಿ ವಾಸವಾಗಿದ್ದವರನ್ನು ತೆರವುಗೊಳಿಸಿದ ಬಳಿಕ 10ದಿನದೊಳಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದವರು ಇಂದಿಗೂ ಈಡೇರಿಸಿಲ್ಲ. ಅದ್ದರಿಂದ ಗಿರಿಜನರ ಸಂವಿಧಾನಾತ್ಮಕ ಹಾಗೂ ಕಾನೂನು ಹೋರಾಟಕ್ಕೆ ಎಸ್ ಡಿ ಪಿ ಐ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ.

ಜಿಲ್ಲಾಡಳಿತ ಜಿಲ್ಲೆಯಲ್ಲಿರುವ ಸರಕಾರಿ ಜಾಗಗಳನ್ನು ಪತ್ತೆ ಹಚ್ಚಿ ನಿವೇಶನ ರಹಿತರ ಪಟ್ಟಿಯನ್ನು ಸಿದ್ಧಪಡಿಸಿ ಕೂಡಲೇ ಗಿರಿಜನರಿಗೆ ಶಾಶ್ವತವಾಗಿ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.

ಭೆಟಿ ಸಂದರ್ಭ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಸಿದ್ದಾಪುರ ಗ್ರಾಮ ಪಂಚಾಯತಿ ಸದಸ್ಯರಾದ ಶೌಕತ್ ಅಲಿ, ಕೃಷ್ಣ, ಹುಸೈನ್ ಮತ್ತಿತರರು ಇದ್ದರು.