Chamrajanagar SDPI Corporator grounded permanent solution to water supply in Ward #4

ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶ್ರಮ ವಹಿಸಿದ ಚಾಮರಾಜನಗರದ SDPI ಕಾರ್ಪೋರೇಟರ್

ಚಾಮರಾಜನಗರ: ಚಾಮರಾಜನಗರ ನಗರಸಭೆಯ ವಾರ್ಡ್ ಸಂಖ್ಯೆ 4 ರಲ್ಲಿ ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರಿಗಾಗಿ ಖಾಸಗಿ ಟ್ಯಾಂಕರ್ ಗಳನ್ನು ಅವಲಂಬಿಸಿ ದುಬಾರಿ ಬೆಲೆತೆತ್ತು ನೀರನ್ನು ಖರೀದಿಸಿ ಕಂಗಾಲಾಗಿದ್ದ ಜನರ ಮನವಿಗೆ ಸ್ಪಂದಿಸಿ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶ್ರಮ ವಹಿಸಿ ಹೊಸ ಟ್ಯಾಂಕ್ ನಿರ್ಮಾಣ ಮಾಡಿ ನೀರಿನ ಸಂಪರ್ಕ ಕಲ್ಪಿಸಿ ವಾರ್ಡ್ ನ ಜನರ ಉಪಯೋಗಕ್ಕೆ ಇಂದು ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ SDPI ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ, SDPI ನಗರಸಭಾ ಸಧ್ಯಸರಾದ ವಹೀದಾ ಖಾನಂ, ಡಾ. ಆರೀಫ್, ಮಹೇಶ್ ಗಾಳಿಪುರ, ಇಮ್ರಾನ್, ಜಿಲ್ಲಾಧ್ಯಕ್ಷರಾದ ಅಬ್ರಾರ್ ಅಹ್ಮದ್, ಉಪಾಧ್ಯಕ್ಷ ಸಮೀಉಲ್ಲಾ ಖಾನ್ ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.