SDPI extended support to the struggle of Pro-Kannada Organizations’ head Vatal Nagraj in a unique program held at Bengaluru

13 Dec 2016, Bengaluru: ಕನ್ನಡಪರ ಹೋರಾಟಗಾರ ಹಾಗೂ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ಶ್ರೀ ವಾಟಾಳ್ ನಾಗರಾಜ್ ರವರಿಗೆ 5 ದಶಕಗಳ ಹಿಂದೆ ಕನ್ನಡಪರ ಹೊರಾಟ ಕೈಗೆತ್ತಿಕೊಂಡ ಕಾರಣ ಪೊಲೀಸರ “ಬೂಟ್ಸ್ ಏಟು” ಬಿದ್ದ ದಿನವನ್ನೆ ತನ್ನ ಹೊರಾಟದ ಜನ್ಮ ದಿನ ಎಂದು ವಿಶೇಷ-ವಿಶಿಷ್ಟ ವಿನೂತನ ರೀತಿಯ ಆಚರಣೆಯನ್ನು ಆಚರಿಸುತ್ತಾ ಬಂದಿದ್ದು ಇದರ ಅಂಗವಾಗಿ ಇಂದು ಬೆಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಮುಖ್ಯ ಅಥಿತಿಗಳಾಗಿ ಬಾಗವಹಿಸಿ ಶುಭ ಹಾರೈಸಿದರು. ಪಕ್ಷವು ಕನ್ನಡ ನಾಡು- ನುಡಿ, ನೆಲ-ಜಲ ಹಾಗೂ ಭಾಷೆಯ ವಿಚಾರದಲ್ಲಿ ರಾಜಿ ರಹಿತ, ನಿಸ್ವಾರ್ಥ ಹೊರಾಟ ನಿರತರಾಗಿರುವ ವಾಟಾಳ್ ನಾಗರಾಜ್ ರವರು ಕೈಗೆತ್ತಿಕೊಳ್ಳುವ ಹೊರಾಟಗಳಲ್ಲಿ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನೀಡಿದರು.

SDPI State Secretary Afsar Kodlipet addressing the gathering at Town Hall Bangalore
SDPI State Secretary Afsar Kodlipet addressing the gathering at Town Hall Bangalore

ಈ ಕಾರ್ಯಕ್ರಮದಲ್ಲಿ ನಾಡಿನ ಪ್ರಖ್ಯಾತ ಕನ್ನಡಪರ ಹೋರಾಟಗಾರರಾದ ಶ್ರೀ ಸಾ.ರಾ ಗೋವಿಂದು, ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಅನಂತ್ ಸುಬ್ಬರಾವ್, ಸಿ.ಪಿ.ಐ, ಬಿ.ಟಿ ಲಲಿತ್ ನಾಯಕ್, ಎಸ್. ನಾಗರಾಜು, ಕಾರ್ಯದರ್ಶಿ ಎ.ಐ.ಟಿ.ಯು.ಸಿ, ಕೆ.ಆರ್ ಕುಮಾರ್, ರಾಜ್ಯಧ್ಯಕ್ಷರು ಕನ್ನಡ ಸೇನೆ, ಪ್ರವೀಣಕುಮಾರ್ ಶೆಟ್ಟಿ ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ, ಶಿವರಾಮೆಗೌಡ ರಾಜ್ಯಧ್ಯಕ್ಷರು ಕರ್ನಾಟಕ ರಕ್ಷಣಾ ವೇದಕೆ, ಮಂಜುನಾಥ್ ದೇವ್ ರಾಜ್ಯಧ್ಯಕ್ಷರು ಕನ್ನಡ ಜಾಗೃತಿ ವೇದಿಕೆ, ಹೆಚ್.ವಿ ಗಿರೀಶ್‍ಗೌಡ ಕನ್ನಡಪರ ಹೋರಾಟಗಾರರು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *